ಜೀ ಕನ್ನಡ ಚಾನೆಲ್ – ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್
ಹೆಮ್ಮೆಯ ಕನ್ನಡಿಗ, ಜೀ಼ ಕುಟುಂಬದಂತಹ ಪ್ರತಿಷ್ಟಿತ ಪ್ರಶಸ್ತಿಗಳನ್ನ ನೀಡುತ್ತ ಬಂದಿರುವ ನಾಡಿನ ನಂ.1 ಮನೋರಂಜನ ವಾಹಿನಿ ಜೀ಼ ಕನ್ನಡ, ರಾಜ್ಯದ ನಾರಿ ಶಕ್ತಿಗೆ ನಮಿಸೋ ಜೀ಼ ಸ್ತ್ರೀ ಅವಾರ್ಡ್ 2024 ರನ್ನ ಪ್ರಸ್ತುತ ಪಡಿಸಿದೆ. ಪ್ರಗತಿ ಪತದಲ್ಲಿ ಸಾಗುತ್ತಿರುವ ದೇಶದ ಎಲ್ಲಾ ರಂಗದಲ್ಲು ಸಾಧನೆಯನ್ನ ಮಾಡುತ್ತಿರುವ , ಮಹಿಳಾ ಮಣಿಯರನ್ನ ಗುರುತಿಸಿ ಗೌರವಿಸುವ ಕೆಲಸವನ್ನ ಜೀ಼ ಕನ್ನಡ ಮೊದಲಿನಿಂದಲು ಮಾಡುತ್ತ ಬಂದಿತ್ತು.ಇದೀಗ ಆ ವಿಭಾಗಕ್ಕೆ ಪ್ರತ್ಯೇಕ ಪ್ರಶಸ್ತಿ ಕಾರ್ಯಕ್ರಮವನ್ನು ಮಾಡುವ ಮುಖಾಂತರ ಜೀ ಕನ್ನಡ ಹೊಸ ಹೆಜ್ಜೆಯೊಂದನ್ನ ಇಟ್ಟಿದೆ.
ಕರುನಾಡಿನ ಕ್ರೀಡಾಕ್ಷೇತ್ರ, ಸಿನಿಮಾರಂಗ, ಸಾಹಿತ್ಯರಂಗ, ವಿಜ್ಞಾನ ರಂಗ, ರಾಜಕೀಯರಂಗ, ಸಮಾಜಿಕ ರಂಗ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ಸಾಧನೆಗೈದ ವಿವಿಧ ಮಹಿಳಾ ಮಣಿಯರನ್ನ , ಮೊದಲ ವರ್ಷದ ಜೀ಼ ಸ್ತ್ರೀ ಅವಾರ್ಡ್‌ಸಮಾರಂಭದಲ್ಲಿ ಹುಡುಕಿ ಗೌರವಿಸುವ ಕೆಲಸ ನಡೆಯಿತು.
ಜೀ ಕನ್ನಡ ಚಾನೆಲ್
ಆಂಕರ್ ಅನುಶ್ರೀ ಮತ್ತು ಕುರಿಪ್ರತಾಪ್ ನಿರೂಪಣೆ ಮಾಡಿದ ಈ ಕಾರ್ಯಕ್ರಮದಲ್ಲಿ ಆಧುನಿಕ ಭಗೀರತಿ ಶಿರಸಿಯ ಗೌರಿ ನಾಯಕ್,ಇಸ್ರೋದಾ ಎಂ.ವಿ ರೂಪ,ಪ್ಯಾರ ಓಲಂಪಿಕ್ ಪಟು ಮಾಲತಿ ಕೃಷ್ಣ ಮೂರ್ತಿ ಹೊಳ್ಳಾ,ಪ್ರಿಯಾಂಕ ಉಪೇಂದ್ರ,ಸುಧಾರಾಣಿ,ಕಾಟೇರದ ನಾಯಕಿ ಆರಾಧನ,ಸುಮಲತಾ ಅಂಬರೀಷ್,ಸಮಾಜ ಸೇವಕಿ ಅನು ಅಕ್ಕ, ಹಿರಿಯ ಹಾಸ್ಯ ಕಲಾವಿದೆ ಲಕ್ಷ್ಮೀ ದೇವಮ್ಮ ಮತ್ತು ನಾಯನ ನಟಿ ಚೈತ್ರ ಜೆ ಆಚಾರ್ ಅವರಿಗೆ ಮೊದಲ ವರ್ಷದ ಗೌರವ ನೀಡಿ ಸನ್ಮಾನಿಸಲಾಯಿತು.
ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್
ಕಾರ್ಯಕ್ರಮದ ವೇದಿಕೆಯಲ್ಲಿ ರಮೇಶ್ ಅರವಿಂದ್,ಶ್ರೀನಗರ ಕಿಟ್ಟಿ,ವಿ.ನಾಗೇಂದ್ರ ಪ್ರಸಾದ್,ನಿರ್ದೇಶಕ ಗುರುಪ್ರಸಾದ್,ಯೋಗರಾಜ್ ಭಟ್,ನಾಗಾಭರಣ,ನಟ ಸುಂದರ್ ರಾಜ್,ನಾದಬ್ರಹ್ಮ ಹಂಸಲೇಖ ನಾಯಕ ನಟಿ ನಿಶ್ವಿಕಾ ನಾಯ್ಡು ಮತ್ತು ಕೃಷ್ಣ ಅಜಯ್ ರಾವ್ ಪ್ರಶಸ್ತಿ ಪುರಸ್ಕೃತರನ್ನ ಗೌರವಿಸಿದರು.
ನೆರೆದ ಅಭಿಮಾನಿಗಳನ್ನ ಮನೋರಂಜಿಸುವ ನಿಟ್ಟಿನಲ್ಲಿ ಮನೋರಂಜನ ಕಾರ್ಯಕ್ರಮಗಳನ್ನ ಆಯೋಜಿಸಿದ್ದ ಜೀ಼ ಕನ್ನಡದ ಈ ಮೊದಲ ಪ್ರಯತ್ನ ,ಇದೇ ಭಾನುವಾರ ಮಾರ್ಚ್ 1೦ ನೇ ತಾರೀಖು ಸಂಜೆ 4 ರಿಂದ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.