ಉದಯ ಟಿವಿ

ಸೂರ್ಯವಂಶ – ಧಾರಾವಾಹಿ ಮಾರ್ಚ್ 11 ರಿಂದ ಸೋಮ-ಶನಿವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಜಾಹೀರಾತುಗಳು

ಉದಯ ಟಿವಿ – ಸೂರ್ಯವಂಶ

Suryavamsha Kannada Serial
Suryavamsha Kannada Serial

ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ ೬ ರಿಂದ ರಾತ್ರಿ ೧೦ ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಮೈನಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ.

ಬಹುನಿರೀಕ್ಷಿತ ಹೊಸ ಧಾರಾವಾಹಿ ʼಸೂರ್ಯವಂಶʼ ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ʼಸೂರ್ಯವಂಶʼ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ವಂಶದ ಕುಡಿಯದೇ ಚಿಂತೆ. ಯಾಕೆಂದರೆ ಇಪ್ಪತ್ತು ವರ್ಷಗಳ ಹಿಂದೆ ಮೊಮ್ಮಗ ಸೂರ್ಯವರ್ಧನ ಕಾಣೆಯಾಗಿದ್ದಾನೆ. ಆದರೆ ಆತ ಬರುವ ಸಾಧ್ಯತೆ ಇಲ್ಲ ಎನ್ನುವುದು ಕುಟುಂಬದ ಉಳಿದ ಸದಸ್ಯರ ನಂಬಿಕೆ. ಬಂದೇ ಬರುತ್ತಾನೆ ಎಂದು ನಂಬಿರುವ ಸತ್ಯಮೂರ್ತಿಯ ಸಮಾಧಾನಕ್ಕೆ ಕುಟುಂಬದ ವಕೀಲರು ಒಬ್ಬ ಸೂಕ್ತ ವ್ಯಕ್ತಿಯ ತಲಾಶ್ ಮಾಡುತ್ತಾರೆ. ಒಂದು ಆಕಸ್ಮಿಕ ಸಂದರ್ಭದಲ್ಲಿ ಒಬ್ಬ ಆಕರ್ಷಕ ಹುಡುಗ ಸಿಕ್ಕೇಬಿಡುತ್ತಾನೆ. ತಾಯಿಯ ಚಿಕಿತ್ಸೆಗೆ ಹಣ ಬೇಕಿರುವ ಒಂದೇ ಕಾರಣಕ್ಕೆ ಆತ ಈ ನಾಟಕಕ್ಕೆ ಒಪ್ಪಿಕೊಳ್ಳುತ್ತಾನೆ. ಅವನೇ ಕಥಾನಾಯಕ ಕರ್ಣ.

Anirudh as Suryavardhan/Karna

ಸೂರ್ಯವಂಶ

ಕರ್ಣ ʼಸೂರ್ಯವಂಶʼಕ್ಕೆ ಕಾಲಿಟ್ಟ ನಂತರ ಮುಂದಿನ ದಾರಿ ಸವಾಲುಗಳಿಂದ ತುಂಬಿರುತ್ತದೆ. ಮನೆಯೊಳಗೂ ಹೊರಗೂ ವಿರೋಧಿಗಳಿದ್ದಾರೆ. ಅದೇ ಊರಿನಲ್ಲಿ ಸೂರ್ಯವಂಶದ ಬದ್ಧಶತ್ರು ಕಾಳಿಂಗನ ಕುಟುಂಬವಿದೆ. ಅವನ ಆಟಾಟೋಪ ಮಿತಿಮೀರಿರುತ್ತದೆ. ಅವನನ್ನು ಬಗ್ಗುಬಡಿಯುವುದು ಕರ್ಣನಿಂದ ಮಾತ್ರ ಸಾಧ್ಯ ಅಂತ ಊರ ಜನ ನಂಬಿದ್ದಾರೆ.
ಈ ನಡುವೆ ಕಥಾನಾಯಕಿ ಸುರಭಿಯ ಆಗಮನವಾಗುತ್ತದೆ. ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಎಲ್ಲ ಸವಾಲುಗಳನ್ನು ಸೂರ್ಯನಾಗಿ ನಟಿಸುತ್ತ ಕರ್ಣ ಹೇಗೆ ಎದುರಿಸುತ್ತಾನೆ ? ಕರ್ಣನೇ ʻಸೂರ್ಯವಂಶʼದ ಕುಡಿ ಸೂರ್ಯವರ್ಧನ ಎನ್ನುವ ವಿಷಯ ಹೇಗೆ, ಯಾರಿಂದ, ಯಾವಾಗ ಬಹಿರಂಗವಾಗುತ್ತದೆ ? ಇವೆಲ್ಲ ಮುಂದಿರುವ ರೋಚಕ ತಿರುವುಗಳು.

ಜಾಹೀರಾತುಗಳು
Ashwini as Surabhi

ಉದಯ ಟಿವಿ

ಕಥಾನಾಯಕ ಸೂರ್ಯವರ್ಧನ/ಕರ್ಣನ ಪಾತ್ರದಲ್ಲಿ ಜನಪ್ರಿಯ ನಟ ಅನಿರುದ್ಧ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಸುರಭಿ ಪಾತ್ರದಲ್ಲಿ ಅಶ್ವಿನಿ, ತಾತ ಸತ್ಯಮೂರ್ತಿ ಪಾತ್ರದಲ್ಲಿ ಸುಂದರರಾಜ್, ಖಳನಟ ಕಾಳಿಂಗನ ಪಾತ್ರದಲ್ಲಿ ದಿ.ಉದಯಕುಮಾರ್ರ ಪುತ್ರ ವಿಕ್ರಂ ಉದಯಕುಮಾರ್ ನಟಿಸುತ್ತಿದ್ದಾರೆ. ಉಳಿದಂತೆ ರವಿ ಭಟ್, ಸುಂದರಶ್ರೀ, ಲೋಕೇಶ್ ಬಸವಟ್ಟಿ, ಪುಷ್ಪಾ ಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರ ದೊಡ್ಡ ತಾರಾಗಣವಿದೆ.

ಹರಿಸಂತು ಪ್ರಧಾನ ನಿರ್ದೇಶನದ ʻಸೂರ್ಯವಂಶʼ ತನ್ವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ಸಂಚಿಕೆ ನಿರ್ದೇಶನ: ಪ್ರಕಾಶ್ ಮುಚ್ಚಳಗುಡ್ಡ, ಛಾಯಾಗ್ರಹಣ: ಶಿವರಾಜು ಎಂ.ಆರ್ ಅವರದು.

Recent Posts

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

3 days ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

2 weeks ago

ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲಿ ‘ವರಲಕ್ಷ್ಮಿ ಕಲ್ಯಾಣ’ , ಮಹಾ ತಿರುವುಗಳುಳ್ಳ ಸಂಚಿಕೆಗಳು ಇದೇ ಸೋಮ-ಶನಿ ಸಂಜೆ 6.30 ಕ್ಕೆ.

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…

2 weeks ago

ಶ್ರೀ ಬ್ರಾಹ್ಮೀ ಹೊಸ ಕಥೆಯ ಶ್ರಾವಣಿ ಸುಬ್ರಮಣ್ಯ ಜೀ಼ ಕನ್ನಡದಲ್ಲಿ ಶುಭಾರಂಭ ಮಾರ್ಚ್‌ 18ರಿಂದ ಮಹಾಮನೋರಂಜನೆಗೆ ಮುನ್ನುಡಿ

ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್‌ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…

1 month ago

ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ – ಜೀ ಕನ್ನಡ ಚಾನೆಲ್

ಜೀ ಕನ್ನಡ ಚಾನೆಲ್ - ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ ಹೆಮ್ಮೆಯ ಕನ್ನಡಿಗ, ಜೀ಼ ಕುಟುಂಬದಂತಹ ಪ್ರತಿಷ್ಟಿತ…

1 month ago

ಲಕ್ಷ್ಮಿ ಟಿಫನ್ ರೂಮ್ ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಕನಸುಗಳನ್ನು ಹೊತ್ತ ವರಲಕ್ಷ್ಮಿಯ ಕಥೆ , ಇದೇ ಸೋಮವಾರದಿಂದ ಸಂಜೆ 6.30 ಕ್ಕೆ…!

ಸ್ಟಾರ್ ಸುವರ್ಣ ಧಾರಾವಾಹಿ ಲಕ್ಷ್ಮಿ ಟಿಫನ್ ರೂಮ್ ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ…

2 months ago