ಜೀ ಕನ್ನಡದಿಂದ ಯುಗಾದಿಗೆ ವಿನೂತನ ಕಾರ್ಯಕ್ರಮಗಳು

ಜಾಹೀರಾತುಗಳು

ಹಿಟ್ಲರ್ ಕಲ್ಯಾಣ ಮತ್ತು ಪುಟ್ಟಕ್ಕನ ಮಕ್ಕಳು ಪ್ರಾರಂಭದೊಂದಿಗೆ ಟಾಪ್ 6 ಪ್ರೈಮ್ ಟೈಮ್ ಶೋಗಳ ಹೊಚ್ಚಹೊಸ ವಿನೂತನ ಸಂಚಿಕೆಗಳು

Infirmation of Hitler Kalyana Serial
Hitler Kalyana Serial

ಮುಂಚೂಣಿಯ ಕನ್ನಡ ಮನರಂಜನಾ ವಾಹಿನಿ ಜೀ ಕನ್ನಡ ಈ ವರ್ಷದ ಯುಗಾದಿ ಸಂಭ್ರಮಾಚರಣೆಯನ್ನು ದೊಡ್ಡ ಮಟ್ಟದಲ್ಲಿ ಕೈಗೊಂಡಿದೆ. ಈ ಹೊಸ ವರ್ಷಕ್ಕೆ ಜೀ ಕನ್ನಡ ವೀಕ್ಷಕರಿಗೆ ಅವರ ಅಚ್ಚುಮೆಚ್ಚಿನ ಶೋಗಳು ಮತ್ತು ಪಾತ್ರಗಳಲ್ಲಿ ವಿನೂತನ ಬದಲಾವಣೆ ತರುತ್ತಿದೆ. ಇದನ್ನು ಅಪಾರ ಸ್ಟೈಲ್ ಮತ್ತು ಅದ್ಧೂರಿಯಾಗಿ ʻಜೀ ಕನ್ನಡ ಕುಟುಂಬ ಉತ್ಸವʼ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದು ಅಲ್ಲಿ ಜೀ ಕನ್ನಡದ ಎಲ್ಲ ಪಾತ್ರಗಳೂ ಒಗ್ಗೂಡಿ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಿದ್ದಾರೆ. ಜೀ ಕನ್ನಡ ತನ್ನ ಬ್ರಾಂಡ್ ತತ್ವ “ಬಯಸಿದ ಬಾಗಿಲು ತೆಗೆಯೋಣ”ಕ್ಕೆ ಅನುಗುಣವಾಗಿ ವೀಕ್ಷಕರನ್ನು ಅದರಲ್ಲಿಯೂ ಮಹಿಳೆಯರಲ್ಲಿ ಸವಾಲು ಎದುರಿಸುವ ದಿಟ್ಟತನ ತುಂಬುತ್ತದೆ, ಈ ಕಂಟೆಂಟ್ ರಿಫ್ರೆಶ್ ಮೂಲಕ ಜೀ ಕನ್ನಡದ ಸೀರಿಯಲ್‌ಗಳು ಮುಖ್ಯ ತಿರುವುಗಳತ್ತ ಸಾಗುವುದನ್ನು ಹೇಳಲಾಗಿದೆ. ಮುಂದಿನ ಕಥೆಯ ಮುಖ್ಯ ತಿರುವುಗಳನ್ನು ಹೇಳಿ ಕಥೆಯನ್ನ ಪೋಣಿಸಲಾಗುತ್ತದೆ.

ಜೊತೆಗೆ ಜೀ ವಾಹಿನಿಯು ಚಾನೆಲ್ ನ ಬ್ರಾಂಡ್ ತತ್ವವನ್ನು ಪ್ರತಿಫಲಿಸುವ ಎರಡು ಹೊಸ ಧಾರಾವಾಹಿಗಳನ್ನು ಪ್ರಕಟಿಸಿದೆ. ಜೀ ಕುಟುಂಬ ಉತ್ಸವದಲ್ಲಿ ಜೀ ಕನ್ನಡದ ಶಕ್ತಿಯುತ ನಾರಿ ಶಕ್ತಿಯನ್ನು, ವಿಶೇಷವಾಗಿ ರೂಪಿಸಿದ ಪ್ರೋಮೋಗಳು ಧಾರಾವಾಹಿಯಲ್ಲಿ ಮುಂದೆ ಬರುವ `ಹೈ ಪಾಯಿಂಟ್ಸ್’ನ ಕಿರುನೋಟ ನೀಡಲಿವೆ.

ಜಾಹೀರಾತುಗಳು

ವೀಕ್ಷರ ನಾಡಿಮಿಡಿತ ಅರಿತ ಚಾನೆಲ್‌ ವೀಕ್ಷಕರು ಅತ್ಯಂತ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮನರಂಜನೆಯ ಕಂಟೆಂಟ್ ಪೂರೈಸುವ ಗುರಿ ಹೊಂದಿದೆ. ಈ ತಂಡವು ಕಮಲಿ, ಪಾರು, ಗಟ್ಟಿಮೇಳ, ಸತ್ಯ ಮತ್ತು ನಾಗಿಣಿ 2 ಧಾರಾವಾಹಿಗಳ ಕಥೆಗಳನ್ನು ತಾಜಾತನದಿಂದ ಹೇಳಲಾಗುತ್ತಿದೆ. ‘ಹಿಟ್ಲರ್ ಕಲ್ಯಾಣ’ ಮತ್ತು `ಪುಟ್ಟಕ್ಕನ ಮಕ್ಕಳು’ ಎರಡು ಹೊಸ ಧಾರಾವಾಹಿಗಳೊಂದಿಗೆ ವೀಕ್ಷಕರು ಮುಂದಿನ ಐಪಿಎಲ್ ಮತ್ತು ಸ್ಪರ್ಧಿಗಳ ಕಾರ್ಯಕ್ರಮಗಳನ್ನೂ ಮೀರಿ ಈ ಚಾನೆಲ್ ಗೆ ಬದ್ಧವಾಗಿರುವಂತೆ ಮಾಡುತ್ತಿದೆ. ವಾಹಿನಿಯು 6 ʼಬ್ರಾಂಡ್ ಐಡೆಂಟ್‌ʼ ಚಿತ್ರಗಳನ್ನು ರೂಪಿಸಿದ್ದು ಅದು ಕರ್ನಾಟಕದ ಮೂಲೆ ಮೂಲೆಗಳ ಕನ್ನಡತನವನ್ನು ಬಿಂಬಿಸಲಿವೆ. ಈ ಚಿತ್ರಗಳು ಕನ್ನಡಿಗರಾಗಿರಲು ಹೆಮ್ಮೆ ತರುವ, ವಿವಿಧ ಬಗೆಯ ಸಾಂಸ್ಕೃತಿಕ ಸಂಗತಿಗಳ ಸುಂದರ ನಿರೂಪಣೆಯಿಂದ ಕನ್ನಡಿಗರಲ್ಲಿ ಹೆಮ್ಮೆಯ ಭಾವನೆ ತರುವುದಲ್ಲದೆ “ಬಯಸಿದ ಬಾಗಿಲು ತೆಗೆಯೋಣ”ಧ್ಯೇಯವನ್ನು ಎತ್ತಿಹಿಡಿಯುತ್ತದೆ.

ಈ ಅಭಿಯಾನ ಬೇರೆ ಬೇರೆ ಮಾಧ್ಯಮಗಳ ಮುಖಾಂತರ ಕರ್ನಾಟಕದ ಜನರನ್ನು ತಲುಪಲಿವೆ. ‘ಹಿಟ್ಲರ್ ಕಲ್ಯಾಣ’ ಮತ್ತು `ಪುಟ್ಟಕ್ಕನ ಮಕ್ಕಳುʼ ಈ ಎರಡೂ ಧಾರಾವಾಹಿಗಳ ಕುರಿತು ಜೀ ಕನ್ನಡ ಹಾಗೂ ಜೀ ಪಿಚ್ಚರ್ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿ “ಜೀ ಕನ್ನಡ ಸದಾ ಹೊಚ್ಚಹೊಸ ಮತ್ತು ವಿಭಿನ್ನವಾದ ಕಂಟೆಂಟ್ ಅನ್ನು ನಮ್ಮ ವೀಕ್ಷಕರಿಗೆ ನೀಡಲು ಮುಂಚೂಣಿಯಲ್ಲಿರುತ್ತದೆ. ಈ ಎರಡು ಧಾರಾವಾಹಿಗಳು ಇನ್ನೊಂದು ಸ್ತರದ ಮನರಂಜನೆಯನ್ನು ವೀಕ್ಷರಿಗೆ ನೀಡಲಿದೆ. `ಬಯಸಿದ ಬಾಗಿಲು ತೆಗೆಯೋಣ’ ಎಂಬ ನಮ್ಮ ಬ್ರಾಂಡ್ ಬದ್ಧತೆಯ ಭಾಗವಾಗಿ ಹಿಟ್ಲರ್ ಕಲ್ಯಾಣ ಮತ್ತು ಪುಟ್ಟಕ್ಕನ ಮಕ್ಕಳು ನಮ್ಮ ವೀಕ್ಷಕರ ಮನಸನ್ನು ಗೆಲ್ಲಲಿವೆ ಎಂಬ ಭರವಸೆ ನಮ್ಮದು. ಅನಂತ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯುವ ಶಕ್ತಿಯುತ ಮತ್ತು ಅರ್ಥಪೂರ್ಣ ಕಥೆಗಳನ್ನು ಪೂರೈಸಲು ನಮ್ಮ ಬದ್ಧತೆಯನ್ನು ಮತ್ತಷ್ಟು ಸದೃಢಗೊಳಿಸಲಿವೆ” ಎಂದರು.

Leave a Comment