ಜೀ ಕನ್ನಡದಲ್ಲಿ ಮಧ್ಯಾಹ್ನದ ಭರಪೂರ ಮನರಂಜನೆ – ಮಾರ್ಚ್ 1, ರಿಂದ ಮೂರು ಮಹೋನ್ನತ ಕಾರ್ಯಕ್ರಮಗಳು ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಾರಂಭ

ಜಾಹೀರಾತುಗಳು
Mane Mane Mahalakshmi
Mane Mane Mahalakshmi

ಸದಾ ವಿನೂತನ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ ಕನ್ನಡ ಇದೀಗ ಮಧ್ಯಾಹ್ನದ ಮನರಂಜನೆಗೆ ಮೂರು ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ.

“ಮನೆ ಮನೆ ಮಹಾಲಕ್ಷ್ಮಿ” ಎಂಬ ವಿನೂತನ ರಿಯಾಲಿಟಿ ಗೇಮ್ ಶೋ ಕರ್ನಾಟಕದ 31 ಜಿಲ್ಲೆಗಳ 175 ತಾಲೂಕುಗಳನ್ನೂ ತಲುಪಲಿದೆ. ಮಾರ್ಚ್ 1, ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮಕ್ಕೆ ಖ್ಯಾತ ನಿರೂಪಕಿ ಸುಷ್ಮಾ ನಿರೂಪಣೆ ಮಾಡಲಿದ್ದಾರೆ. ರಾಜ್ಯದ ಮೂಲೆ ಮೂಲೆಯ ಮಹಿಳೆಯರು ಇದರಲ್ಲಿ ಭಾಗವಹಿಸುತ್ತಾರೆ. ನಿರೂಪಕಿ ಸುಷ್ಮಾ ಪ್ರತಿ ತಾವೇ ಸ್ವತಃ ಮನೆಗಳಿಗೆ ಭೇಟಿ ನೀಡಿ ಈ ಎಲೆ ಮರೆಯ ಕಾಯಿಯಂತೆ ಕುಟುಂಬದ ಶ್ರೇಯಸ್ಸಿಗೆ ಶ್ರಮಿಸುತ್ತಿರುವ ಗೃಹಿಣಿಯರ ಸಾಧನೆಯನ್ನು ಅನಾವರಣಗೊಳಿಸುತ್ತಾರೆ. ಕುಟುಂಬಕ್ಕೆ ವಿವಿಧ ಬಗೆಯ ಟಾಸ್ಕ್ ನೀಡಿ ಅವರನ್ನು ಸಕ್ರಿಯರಾಗಿಸುತ್ತಾರೆ. ನಗದು ಬಹುಮಾನಗಳನ್ನೂ ಗೆಲ್ಲಲು ಅವಕಾಶವಿದೆ.

ಅಪರೂಪದ “ತ್ರಿನಯನಿ” , “ತ್ರಿನಯನಿ” ಎಂಬ ಧಾರಾವಾಹಿಯನ್ನು ಮಾರ್ಚ್ 1, 2021ರಿಂದ ಮಧ್ಯಾಹ್ನ 2ರಿಂದ 3ರವರೆಗೆ ಪ್ರಸಾರ ಮಾಡುತ್ತಿದೆ. “ತ್ರಿನಯನಿ” ಹೆಸರೇ ಹೇಳುವಂತೆ ಭೂತ ಹಾಗೂ ಭವಿಷ್ಯವನ್ನು ಕಾಣುವ ಶಕ್ತಿಯುಳ್ಳ ಹೆಣ್ಣೊಬ್ಬಳ ಕಥೆ. ಈ ವಿಶೇಷ ಶಕ್ತಿಯನ್ನು ಆಕೆ ತನ್ನ ಕುಟುಂಬದ ಒಳಿತಿಗೆ ಬಳಸುತ್ತಾಳೆ. ಜೀ ನಿರ್ಮಾಣದ ನಂಬರ್ ಒನ್ ಧಾರಾವಾಹಿ ಬಂಗಾಳಿ ಭಾಷೆಯಲ್ಲಿ ಅಪಾರ ಯಶಸ್ಸು ಗಳಿಸಿತ್ತು. ಈ ಧಾರಾವಾಹಿ ನಂತರ ತೆಲುಗು ಭಾಷೆಯಲ್ಲಿಯೂ ಅಪಾರ ಯಶಸ್ಸು ಕಂಡಿತ್ತು. ಈಗ ಕನ್ನಡದಲ್ಲೂ ರಂಜಿಸಲು ಸಿದ್ಧವಾಗಿದೆ.

ಜಾಹೀರಾತುಗಳು
Nagabhairavi Zee Kannada
Nagabhairavi Zee Kannada

ತ್ರಿನಯನಿಗೆ ಭವಿಷ್ಯದ ಆಗುಹೋಗುಗಳು ತಿಳಿಯುವುದರಿಂದ ಆಕೆ ಅವಘಡಗಳಿಂದ ತಪ್ಪಿಸಲು ಪ್ರಯತ್ನಿಸುತ್ತಾಳೆ. ಆದರೆ ಜನರು ಅದನ್ನು ತಪ್ಪಾಗಿ ತಿಳಿಯುತ್ತಾರೆ. ಆಕೆಯನ್ನು ದೂಷಿಸುತ್ತಾರೆ. ಆಕೆಯ ವಿವಾಹದಲ್ಲಿ ಆಕೆಯ ಪತಿಯೂ ಹಾಗೆಯೇ ಭಾವಿಸುತ್ತಾರೆ. ರೋಚಕ ತಿರುವುಗಳನ್ನು ಹೊಂದಿರುವ ಈ ಧಾರಾವಾಹಿ ಕನ್ನಡ ವೀಕ್ಷಕರನ್ನು ರಂಜಿಸುವುದರಲ್ಲಿ ಅನುಮಾನವೇ ಇಲ್ಲ. ಕನ್ನಡ ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಹಿರಿಯ ನಟಿ ರಮ್ಯಾಕೃಷ್ಣ

ಖ್ಯಾತ ನಟಿ ರಮ್ಯಾ ಕೃಷ್ಣ ಅವರು ಮೊಟ್ಟಮೊದಲ ಬಾರಿಗೆ ಕಿರುತೆರೆಗೆ ಪ್ರವೇಶ ಪಡೆಯುತ್ತಿದ್ದಾರೆ. ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರದಿಂದ ವಿಶ್ವವ್ಯಾಪಿ ಖ್ಯಾತಿ ಪಡೆದ ನಟಿ ರಮ್ಯಾಕೃಷ್ಣ ನಟನೆ ಕಿರುತೆರೆಯಲ್ಲಿ ಸಂಚಲನ ಮೂಡಿಸಿದೆ. ಅವರು ಪ್ರಮುಖ ಪಾತ್ರ ವಹಿಸಿರುವ “ನಾಗಭೈರವಿ” ಎಂಬ ವಿನೂತನ ಧಾರಾವಾಹಿ ನಮ್ಮದೇಶದಲ್ಲಿರುವ ನಾಗರ ನಂಬಿಕೆಗಳ ಸುತ್ತಲೂ ರೂಪುಗೊಂಡಿರುವ ವಿನೂತನ ಧಾರಾವಾಹಿಯಾಗಿದೆ. ಪ್ರಾಚೀನ ಆರೋಗ್ಯ ಗ್ರಂಥ “ಚರಕ ಸಂಹಿತಾ”ವನ್ನು ರಕ್ಷಿಸಲು ಭೈರವಿ ಮತ್ತು ನಾಗಾರ್ಜುನ ಒಂದು ಹಳೆಯ ದೇವಾಲಯದಲ್ಲಿ ವಾಸಿಸುತ್ತಿರುತ್ತಾರೆ. ಆದರೆ ಪರಿಸ್ಥಿತಿಯ ಒತ್ತಡದಿಂದ ಅವರು ಪರಸ್ಪರ ಬೇರೆಯಾಗಬೇಕಾದಾಗ ಅವರ ಗುರಿಯನ್ನು ಈಡೇರಿಸಲು ಸಾಧ್ಯವಾಗುತ್ತದೆಯೇ ಎನ್ನುವುದು ಕುತೂಹಲಕಾರಿ ಅಂಶ. ಸಸ್ಪೆನ್ಸ್ ಹಾಗೂ ಐತಿಹಾಸಿಕ ಅಂಶಗಳಿಂದ ವೀಕ್ಷಕರ ಕುತೂಹಲ ಹೆಚ್ಚಿಸುತ್ತದೆ. ಅದ್ಭುತ ಸೆಟ್ ಗಳು, ವಿಷುಯಲ್ ಎಫೆಕ್ಟ್ಸ್ ಮೂಲಕ ಈ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತದೆ. ರಮ್ಯಾಕೃಷ್ಣ ಕನ್ನಡದಲ್ಲಿ ವಿಷ್ಣುವರ್ಧನ್, ರವಿಚಂದ್ರನ್ ಅವರೊಂದಿಗೆ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದು ನಂತರ “ಬಾಹುಬಲಿ” ಚಿತ್ರದಿಂದ ದೇಶವ್ಯಾಪಿ ಪ್ರಸಿದ್ಧಿಯಾದರು.

Trinayani Zee Kannada
Trinayani Zee Kannada

ಈ ಧಾರಾವಾಹಿಯು ಮಾರ್ಚ್ 1, 2021ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 3ರಿಂದ 4ರವರೆಗೆ ಪ್ರಸಾರವಾಗಲಿದೆ.

Leave a Comment