ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಇದೇ ಜೂನ್ 17 ರಿಂದ ರಾತ್ರಿ 10 ಗಂಟೆಗೆ! ಋಣಕೂ ಗುಣಕೂ ಅಂದದ ನಂಟು!

ಜಾಹೀರಾತುಗಳು

ಧಾರಾವಾಹಿ ಬ್ರಹ್ಮಗಂಟು – ಜೀ ಕನ್ನಡ ಚಾನೆಲ್

Serial Brahmagantu Zee Kannada
Serial Brahmagantu Zee Kannada

ಹೊಸತನಕ್ಕೆ ಇನ್ನೊಂದು ಹೆಸರು ಜೀ಼ ಕನ್ನಡ. ಈಗ ತನ್ನ ವೀಕ್ಷಕರಿಗಾಗಿ ಹೊಸ ಕಥೆಯೊಂದನ್ನು ಹೊತ್ತು ತರುತ್ತಿದೆ. ಹೊಸ ಧಾರಾವಾಹಿ ‘ಬ್ರಹ್ಮಗಂಟು’ ಜೂನ್ 17 ರಿಂದ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.ಭರ್ಜರಿ ರೇಟಿಂಗ್ ಮೂಲಕ ಆರಂಭವಾದ, ಮಹಾ ನಟಿ ಉಮಾಶ್ರೀ ಅಭಿನಯದ ‘ಪುಟ್ಟಕ್ಕನ ಮಕ್ಕಳು’ ಈಗಲೂ ನಂಬರ್ ಒನ್ ಧಾರಾವಾಹಿಯಾಗಿ ಮುಂದುವರಿದಿದೆ.

ಇದರ ಜತೆಗೆ ಸತ್ಯ, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿರುವ ಶ್ರೀರಸ್ತು ಶುಭಮಸ್ತು, ಅಮೃತಧಾರೆ, ಇತ್ತೀಚೆಗೆ ಹೊಸ ಸೆನ್ಸೇಷನ್ ಸೃಷ್ಟಿಸಿರುವ ಕೂಡು ಕುಟುಂಬದ ಕಥೆ ಲಕ್ಷ್ಮಿ ನಿವಾಸ, ಶ್ರಾವಣಿ ಸುಬ್ರಹ್ಮಣ್ಯ, ಸೀತಾ ರಾಮ ಧಾರಾವಾಹಿಗಳು ಯಶಸ್ವಿಯಾಗಿ ಮುನ್ನಡೆದಿವೆ. ಈ ವಿಭಿನ್ನ ಕತೆಗಳ ಸರಣಿಗೆ ಹೊಸ ಸೇರ್ಪಡೆಯೇ ‘ಬ್ರಹ್ಮಗಂಟು’.

‘ಮುಖದ ಸೌಂದರ್ಯ ಚರ್ಮ ಇರೋ ತನಕ. ಮನಸಿನ ಸೌಂದರ್ಯ ಜನ್ಮ ಇರೋ ತನಕ’ ಎಂಬಂತೆ ಅಂದಕ್ಕಿಂತ ಗುಣ ಮುಖ್ಯ ಎಂಬ ಸಂದೇಶ ಸಾರುವ ಕಥೆ ಇದು.

ಬ್ರಹ್ಮಗಂಟು

ತನಗೆ ಮದುವೆಯೇ ಬೇಡ ಎಂಬ ನಿರ್ಧಾರದಲ್ಲಿರುವ ಸಾಧಾರಣ ರೂಪಿನ ಕಥಾ ನಾಯಕಿ ದೀಪಾ. ತನ್ನ ಸೌಂದರ್ಯದ ಬಗ್ಗೆ ಅತಿಯಾದ ಅಹಂಕಾರ ಹೊಂದಿರುವ ಇವಳ ಅಕ್ಕ ರೂಪಾ. ಅತ್ತಿಗೆ ಸೌಂದರ್ಯಳನ್ನು ಅಮ್ಮನಿಗಿಂತಲೂ ಮಿಗಿಲಾಗಿ ಗೌರವಿಸುವ ಕಥಾನಾಯಕ ಚಿರಾಗ್. ರೂಪಾ ಜತೆ ಚಿರಾಗ್ ಮದುವೆ ನಿಶ್ಚಯ ಮಾಡೋ ಸೌಂದರ್ಯ. ಆಕಸ್ಮಿಕ ಸನ್ನಿವೇಶದಲ್ಲಿ ಅಕ್ಕನ ಬದಲು ಚಿರಾಗ್ ಜತೆ ಮದುವೆಯಾಗೋ ದೀಪಾ. ಒಲ್ಲದ ಗಂಡ, ತಿರಸ್ಕಾರದಿಂದ ನೋಡೋ ಗಂಡನ ಮನೆಯವರ ಮಧ್ಯೆ ಹೊಯ್ದಾಡುವ ದೀಪಾಳ ಬದುಕು. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ, ಅವರ ಮನಸಿನ ಸೌಂದರ್ಯ ಅನಾವರಣ ಮಾಡುವ ಅಪರೂಪದ ಕಥೆಯೇ ‘ಬ್ರಹ್ಮಗಂಟು’.

ಜಾಹೀರಾತುಗಳು

ಧೃತಿ ಕ್ರಿಯೇಶನ್ಸ್ ಮೂಲಕ ಖ್ಯಾತ ಕಲಾವಿದ ದಿಲೀಪ್ ರಾಜ್ – ಶ್ರೀವಿದ್ಯಾ ರಾಜ್ ನಿರ್ಮಾಣದಲ್ಲಿ, ಉದಯ್ ನಿರ್ದೇಶನ, ಪ್ರಭು ಛಾಯಾಗ್ರಹಣ ಈ ಧಾರಾವಾಹಿಗಿದೆ. ಸುಧೀಂದ್ರ ಭಾರದ್ವಾಜ್, ನಿಶ್ಚಿತಾ ಶರತ್, ಸುಶಾಂತ್ ಮುಂಗರವಳ್ಳಿ ಚಿತ್ರಕತೆ, ನಂದಿನಿ ನಂಜಪ್ಪ ಸಂಭಾಷಣೆ ಬರೆದಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ.

Serial Brahmagantu
Serial Brahmagantu

ಪ್ರೀತಿ ಶ್ರೀನಿವಾಸ್, ರೋಹಿತ್ ಶ್ರೀನಾಥ್, ಶ್ವೇತಾ ರಾವ್, ಭುವನ್, ದಿಯಾ, ಕಾವ್ಯಾ, ಶರಣ್ಯಾ, ರೋಹಿತ್, ಶಿವಾಜಿ ರಾವ್ ಜಾಧವ್, ಅಭಿನಯಾ, ಸಿತಾರಾ, ಸುರೇಶ್ ರೈ, ಹರ್ಷಾ ಮುಂತಾದವರ ತಾರಾಗಣವಿದೆ.

“ಬ್ರಹ್ಮಗಂಟು” ಇದೇ ಜೂನ್ 17 ರ ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Leave a Comment